ಅಧಿಕಾರ ಕೇವಲ ಪ್ರಚಾರದ ಸೋಗಲ್ಲ, ಜನಸೇವೆಯ ಮಹಾ ಸಂಕಲ್ಪ: ಹನುಮಂತಪ್ಪ ರಾಂಪೂರ ಕರೆ

 ಅಧಿಕಾರ ಕೇವಲ ಪ್ರಚಾರದ ಸೋಗಲ್ಲ, ಜನಸೇವೆಯ ಮಹಾ ಸಂಕಲ್ಪ: ಹನುಮಂತಪ್ಪ ರಾಂಪೂರ ಕರೆ Power is not just a pretense of publicity, it is a great resolve to serve the people: Hanumanthappa

ಲೋಕದರ್ಶನ ವರದಿ 

ಗದಗ 09: ಸಮಾಜದಲ್ಲಿ ಅಧಿಕಾರ ಅಥವಾ ಉನ್ನತ ಸ್ಥಾನಮಾನಗಳು ಸಹಜವಾಗಿ ದೊರಕಬಹುದು. ಆದರೆ, ಸಿಕ್ಕ ಅಧಿಕಾರವನ್ನು ಕೇವಲ ಪ್ರಚಾರಕ್ಕಾಗಿ ಅಥವಾ ವೈಯಕ್ತಿಕ ಪ್ರತಿಷ್ಠೆಗಾಗಿ ಬಳಸುವವನು ಎಂದಿಗೂ ನಾಯಕನಾಗಲಾರ. ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ, ನೊಂದವರ ಪರವಾಗಿ ಧ್ವನಿಯೆತ್ತಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಾಯಕನಿದ್ದಾಗ ಮಾತ್ರ ಆ ಗೌರವಾನ್ವಿತ ಸ್ಥಾನಕ್ಕೆ ನಿಜವಾದ ಘನತೆ ಬರುತ್ತದೆ" ಎಂದು ಕರ್ನಾಟಕ ಸವಿತಾ ಸಮಾಜದ ರಾಜ್ಯ ನಾಯಕರಾದ ಹನುಮಂತಪ್ಪ ರಾಂಪೂರ ಅವರು ಸಮಾಜಕ್ಕೆ ಅತ್ಯಂತ ಅರ್ಥಪೂರ್ಣ ನೀತಿ ಪಾಠ ಹೇಳಿದರು. 

ಅವರು ಗದಗ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾನೆ ಅವರ ನಿಸ್ವಾರ್ಥ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿ, ಸಮಾಜದ ಕ್ರಿಕೆಟ್ ತಂಡದ ಸರ್ವ ಸದಸ್ಯರು ಒಗ್ಗಟ್ಟಾಗಿ ಸೇರಿ ಅವರನ್ನು ಶಾಲು ಹೊದಿಸಿ, ಭವ್ಯವಾಗಿ ಸನ್ಮಾನಿಸಿ ಗೌರವಿಸಿದರು ಈ ಒಂದು ಮಹತ್ವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇತ್ತೀಚೆಗೆ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್‌. ಹಡಪದ ಅವರ ವಿಶೇಷ ಮುತುವರ್ಜಿಯಿಂದ ಹಾಗೂ ಸಹಪಾಠಿಗಳ ತೀವ್ರ ಕಳಕಳಿಯಿಂದಾಗಿ ಕಾರ್ಮಿಕ ಇಲಾಖೆಯ ಮೂಲಕ ಸಮಾಜದ 250 ಕ್ಕೂ ಹೆಚ್ಚು ಜನರಿಗೆ ಅಸಂಘಟಿತ ಕಾರ್ಮಿಕ ಗುರುತಿನ ಚೀಟಿಗಳನ್ನು ಮಂಜೂರು ಮಾಡಿಸಿದ್ದನ್ನು ನಮ್ಮೆಲ್ಲರ ನೆಚ್ಚಿನ ಯುವ ನಾಯಕರು ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರು ಪಾಟೀಲ ಅವರಿಂದ ಸಮಾಜ ಬಾಂಧವರಿಗೆ ಅಸಂಘಟಿತ ಕಾರ್ಮಿಕ ಗುರುತಿನ ಚೀಟಿಗಳನ್ನು ವಿತರಿಸಲಾಗಿದ್ದನ್ನು ಸ್ಮರಿಸಿ ಮುಂದುವರೆದು ಮಾತನಾಡಿ ಈ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅತ್ಯಂತ ಶ್ರಮವಹಿಸಿ, ತಳಮಟ್ಟದ ವ್ಯವಸ್ಥೆಯನ್ನು ಅರಿತು, ಪ್ರತಿಯೊಬ್ಬರಿಗೂ ಸರಳವಾಗಿ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾನೆ ಹಾಗೂ ಅವರ ಕುಟುಂಬದ ಸದಸ್ಯರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು ಅಭಿನಂದನಾರ್ಹ ಎಂದು ಶ್ಲಾಘಿಸಿದರು. 

ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು, ಮಾತನಾಡಿ ಕೇವಲ ಹೆಸರಿಗಷ್ಟೇ ದೊಡ್ಡ ದೊಡ್ಡ ಹುದ್ದೆಗಳನ್ನು ಹಿಡಿದು, ಅಧಿಕಾರದ ಮದದಲ್ಲಿ ಬೀಗುತ್ತಾ ಸಮಾಜದ ಅಮೂಲ್ಯ ಸಮಯವನ್ನು ಹಾಳು ಮಾಡುವ ಸುಸ್ತಿ ಪದಾಧಿಕಾರಿಗಳ ಅಗತ್ಯ ಇಂದಿನ ವ್ಯವಸ್ಥೆಗೆ ಬೆಕಾಗಿಲ್ಲ. ಕೆಲಸ ಮಾಡದವರು ಮಂಜುನಾಥ ಮಾನೆ ಅವರ ಕಾರ್ಯಕ್ಷಮತೆಯನ್ನು ನೋಡಿ ಕಲಿಯಬೇಕು, ಇಲ್ಲವೇ ಸ್ವಯಂಪ್ರೇರಿತರಾಗಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಕಳಕಳಿಯಿಂದ ಮತ್ತು ನಿಸ್ವಾರ್ಥವಾಗಿ ಸೇವೆ ಮಾಡಲು ಸಿದ್ಧರಿರುವ ಇತರ ಬಾಂಧವರಿಗೆ ಸಮಾಜದ ಉನ್ನತ ಸ್ಥಾನಮಾನಗಳ ಮುಕ್ತ ಅವಕಾಶ ಕಲ್ಪಿಸಿಕೊಟ್ಟರೆ ನಮ್ಮ ಸಮಾಜವು ಇತರ ಮುಂಚೂಣಿ ಸಮಾಜಗಳಂತೆ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಲು ಸಾಧ್ಯ" ಎಂದು ಕರೆ ನೀಡಿದರು.     

ಸಮಾಜದ ಹಿರಿಯರಾದ ಹೇಮಂತ ವಡ್ಡೆಪಲ್ಲೆ ಅವರು, ಮಾತನಾಡಿ ಸಮಾಜದ ಸಮಗ್ರ ಅಭಿವೃದ್ಧಿಗೆ ಯುವ ನಾಯಕರ ಪಾತ್ರ ಅತ್ಯಂತ ದೊಡ್ಡದಾಗಿದೆ. ಮಂಜುನಾಥ ಮಾನೆ ಅವರಂತಹ ನಿಷ್ಠಾವಂತ ಕಾರ್ಯಕರ್ತರು ನಿಸ್ವಾರ್ಥ ಭಾವನೆಯಿಂದ ದುಡಿಯುತ್ತಿರುವುದು ನಮ್ಮ ಸಮಾಜದ ಸೌಭಾಗ್ಯ. ಜಿಲ್ಲಾಧ್ಯಕ್ಷರು ನೀಡಿದ ಜವಾಬ್ದಾರಿಯನ್ನು ತಮ್ಮ ಸ್ವಂತ ಕುಟುಂಬದ ಕೆಲಸವೆಂದು ಭಾವಿಸಿ ಅಚ್ಚುಕಟ್ಟಾಗಿ ನಿಭಾಯಿಸಿ ಸಮಾಜದ 250 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಇಂತಹ ವೈಚಾರಿಕ ಹಾಗೂ ಜನಪರ ಚಿಂತನೆಯುಳ್ಳ ಯುವ ನಾಯಕರಿಗೆ ನಮ್ಮ ಸವಿತಾ ಸಮಾಜ ಸದಾ ಬೆನ್ನೆಲುಬಾಗಿ ನಿಲ್ಲಲಿದೆ" ಎಂದು ಹಾರೈಸಿದರು. ಸವಿತಾ ಸಮಾಜದ  ಕ್ರಿಕೆಟ್ ತಂಡದ ನಾಯಕರಾದ ಕೃಷ್ಣಾ ಬೂದುರ ಹಾಗೂ ತಂಡದ ಮುಂಚೂಣಿ ಆಟಗಾರರಾದ ಸುನಿಲ ರಾಯಚೂರು ಜಂಟಿಯಾಗಿ ಮಾತನಾಡಿ ಮಂಜುನಾಥ ಮಾನೆ ಅಣ್ಣನವರ ಕಾರ್ಯವೈಖರಿ ನಮ್ಮ ಸಮಾಜದ ಯುವ ಪೀಳಿಗೆಗೆ ಮತ್ತು ಕ್ರೀಡಾಪಟುಗಳಿಗೆ ದಾರೀದೀಪವಾಗಿದೆ. ಎಂದು ಹೇಳಿದರು. 

ಗೌರವ ಸನ್ಮಾನ ಸಮಾರಂಭದಲ್ಲಿ ಸವಿತಾ ಸಮಾಜದ ಜಿಲ್ಲಾ ಖಜಾಂಚಿಗಳಾದ ಅರೂಣ ರಾಂಪೂರ. ಸಮಾಜದ ಪ್ರಮುಖರಾದ ಶ್ರೀನಿವಾಸ ಕೋಟೆಕಲ್ಲ. ಸುರೇಶ ಬುದೂರ. ಪರಶುರಾಮ ಮಾರ್ಲಬೇಡ್‌. ಪರಶುರಾಮ ಕೊಲ್ಪುರ್‌. ವಿನಾಯಕ ರಾಯಚೂರು. ಕ್ರಿಕೆಟ್ ತಂಡದ ಉಪನಾಯಕರಾದ ವೆಂಕಟೇಶ ಕೋಟೆಕಲ್ಲ. ತಂಡದ ಪ್ರಮುಖ ಸದಸ್ಯರಾದ ವಿಜಯ್ ಬೂದೂರ. ಸುರೇಶ ಬಾಯಲಗುಡ್ಡ. ಗಣೇಶ ಕಡಮೂರ. ಪ್ರಕಾಶ ಬೂದುರ. ಸಾಗರ ಹಡಪದ. ಸಂದೀಪ ಕೋಟೆಕಲ್ಲ. ರಾಹುಲ್ ನಾರಾಯಣಪೇಟ್‌. ತುಕಾರಾಮ ವಡ್ಡೆಪಲ್ಲೆ. ಸಾಗರ ಕೋಟೆಕಲ್ಲ. ಅಭಿಷೇಕ ಕಡಮೂರ. ಸಂಜಯ್ ಬೂದೂರ. ನಂದನ್ ಬೂದೂರ. ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.