ಕಡವಾಡ -ಸುಂಕೇರಿ : ಬಳಕೆ ಮಾಡದ ಹಳೆಯ ಸೇತುವೆ ಕುಸಿತ
Kadawada-Sunkeri: Old unused bridge collapses
ಕಾರವಾರ 09: ಕಾರವಾರದ ಸುಂಕೇರಿ- ಕಡವಾಡ ಗ್ರಾಮಗಳನ್ನು ಬೆಸೆಯುತ್ತಿದ್ದ, ಬಳಕೆ ಮಾಡದೇ ಹಾಗೆ ಬಿಟ್ಟಿದ್ದ ಹಳೆಯ ಸೇತುವೆ ನಿನ್ನೆ ರಾತ್ರಿ ಕುಸಿದಿದೆ. ಕಾಳಿ ನದಿ ಹಿನ್ನೀರಲ್ಲಿ ಈ ಸೇತುವೆ ನಿರ್ಮಾಣ ಐವತ್ತೈದು ವರ್ಷಗಳ ಹಿಂದೆ ಆಗಿತ್ತು. ಆ ಕಾಲದ ಪ್ರಸಿದ್ಧ ಗುತ್ತಿಗೆದಾರ ಆರ್.ಎನ್.ಶೆಟ್ಟಿ ಈ ಸೇತುವೆಯನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ್ದರು. ಕಡವಾಡ ಕಾರವಾರ ಸುಂಕೇರಿ ಪ್ರದೇಶವನ್ನು ಸಂಪರ್ಕಿಸುತ್ತಿತ್ತು. ಈ ಸೇತುವೆ ಹಿನ್ನೀರಿನಲ್ಲಿ ಇದ್ದ ಕಾರಣ ಗಾಳ ಹಾಕಿ ಮೀನು ಹಿಡಿಯಲು ಸಹ ಈ ಸೇತುವೆ ಆಧಾರವಾಗಿತ್ತು. ಸೇತುವೆ ಶಿಥಿಲಾವಸ್ಥೆ ತಲುಪಿದ್ದ ಕಾರಣ ಹತ್ತು ವರ್ಷಗಳ ಹಿಂದೆ ಈ ಸೇತುವೆಯ ಮೇಲೆ ವಾಹನ ಸಂಚಾರ ನಿರ್ಬಂಧ ಮಾಡಲಾಗಿತ್ತು. ಅಲ್ಲದೆ ಇದರ ಪಕ್ಕದಲ್ಲಿ ಎಂಟು ವರ್ಷಗಳ ಹಿಂದೆ ಹೊಸ ಸೇತುವೆಯನ್ನು ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ನಿರ್ಮಾಣ ಮಾಡಲಾಗಿತ್ತು. ಹೊಸ ಸೇತುವೆ ಎಂಟು ವರ್ಷಗಳ ಹಿಂದೆ ಉದ್ಘಾಟನೆ ಆಗಿತ್ತು. ನಂತರ ಹಳೆಯ ಸೇತುವೆ ಬಳಕೆ ಸಂಪೂರ್ಣ ನಿಂತಿತ್ತು. ಬಳದೇ ಇದ್ದ ಹಳೆಯ ಸೇತುವೆಯ ಒಂದು ತುದಿಯಲ್ಲಿ ಮೂರು ಸ್ಲ್ಯಾಬ್ ಕುಸಿದಿವೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಬಳಸದೆ ಬಿಟ್ಟ ಸೇತುವೆಯಾದ ಕಾರಣ ,ಯಾರಿಗೂ ಹಾನಿ ಸಂಭವಿಸಿಲ್ಲ ಎಂದು ತಾಲೂಕಿನ ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ 