ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
Jaffa leader who threatened Seth MLA who came forward for pro-Kannada resolution
ಬೆಳಗಾವಿ : ಪಾಲಿಕೆಯಲ್ಲಿ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಎಂಬ ನಿರ್ಣಯವನ್ನು ತಾವೇ ಮಂಡಿಸುವದಾಗಿ ಹೇಳಿರುವ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅಸೀಫ್ ಸೇಠ್ ಅವರಿಗೆ ಝಾಫಾ ಮುಖಂಡ ಶುಭಂ ಶೇಳಕೆ ಎಚ್ಚರಿಕೆಯ ರೀತಿಯಾಗಿ ಗೊಡ್ಟು ಬೆದರಿಕೆ ಹಾಕಿದ್ದಾನೆ. ಕನ್ನಡಪರ ನಿರ್ಣಯ ಮಂಡಿಸುವ ಕುರಿತು ಹೇಳಿಕೆ ನೀಡಿ ಗಡಿ ಮರಾಠಿಗರ ಗಾಯದ ಮೇಲೆ ಉಪ್ಪು ಸುರಿಯುವ ಕಾರ್ಯ ಮಾಡಬೇಡಿ. ಇಲ್ಲದಿದ್ದರೆ ಮುಂದೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದಾನೆ.
ಈ ಕುರಿತು ಹೇಳಿಕೆ ನೀಡಿರುವ ವಿಡಿಯೋ ಒಂದನ್ನು ಹರಿಬಿಟ್ಟು, ಕಳೆದ ಕೆಲವು ದಿನಗಳಿಂದ ಕನ್ನಡ ಹೋರಾಟಗಾರರ ಮೇಲೆ ಶಾಸಕ ಅಸೀಫ್ ಸೇಠ್ ಅವರಿಗೆ ಪ್ರೀತಿ ಹೆಚ್ಚಾಗಿದೆ. ಸೇಠ್ ಅವರನ್ನು ಒಳ್ಳೆಯ ವ್ಯಕ್ತಿ ಎಂದು ಮರಾಠಿ ಗರು ನೋಡುತ್ತಿದ್ದರು. ಈ ಕನ್ನಡಪರ ನಿರ್ಣಯ ಮಾಡಿದರೆ ನೀವೇ ಸ್ವತಃ ಅದೋಗತಿ ಕಡೆಗೆ ಹೋಗುತ್ತಿರಿ ಎಂದು ಹೇಳಿದ್ದಾನೆ.
ಮರಾಠಿಗರ ಗಾಯದ ಮೇಲೆ ಉಪ್ಪು ಸುರಿಯುವ ಕಾರ್ಯ ಮಾಡಬೇಡಿ. ಕನ್ನಡಿಗರ ಮಾತು ಕೇಳಿ ಯಾವ ಕಾರ್ಯ ಮಾಡಬೇಡಿ. ಕೊವೀಡ್ ವೇಳೆ ಅಂಜುಮನ್ ಸಂಸ್ಥೆ ಹಾಗೂ ನೀವು ಎಲ್ಲರಿಗೆ ಸಹಕಾರ ಮಾಡಿದ್ದಿರಿ, ಆ ಕಾರಣಕ್ಕಾಗಿ ನಿಮಗೆ ಪ್ರೀತಿಯ ಸಲಹೆ ನೀಡುತ್ತಿದ್ದೇನೆ.
ಮರಾಠಿಗರ ಕಡೆಗಣಿಸಿದರೆ ನೀವು ಅಧೋಗತಿ ಕಡೆಗೆ ಹೋಗುವೀರಿ ಇದರಲ್ಲಿ ಸಂಶಯವಿಲ್ಲ. ನಿಮ್ಮ ಸುರಕ್ಷತೆ ಇರಬೇಕಾದರೆ ನೀವು ಇತಿಹಾಸ ನೋಡಬೇಕು ಎನ್ನುವ ಎಚ್ಚರಿಕೆ ನೀಡಿದ್ದಾನೆ.
ಆದರು ನೀವು ಇದನ್ನು ಮುಂದೆ ವರೆಸಿದ್ದಲ್ಲಿ ಮರಾಠಿಗರು ಸುಮ್ಮನೆ ಇರುವದಿಲ್ಲ ಎನ್ನುವದನ್ನು ಲಕ್ಷದಲ್ಲಿ ಇಡಿ. ಒಂದು ವೇಳೆ ಈ ಕಾರ್ಯ ಮಾಡಿದರೆ ಮುಂದೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗೊಡ್ಡು ಬೆದರಿಕೆ ನೀಡಿದ್ದಾನೆ.
ಮರಾಠಿಗರ ಭವಿಷ್ಯದ ಜೊತೆ ಆಡವಾಡಿದರೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾನೆ. ಶಾಂತಿಯುತ ನಾವು ಹೋರಾಟ ಮಾಡುವಾಗ ಸರಕಾರ ನಮ್ಮ ಹೋರಾಟ ಹತ್ತಿಕ್ಕುವ ಕಾರ್ಯ ಮಾಡುತ್ತದೆ.
ಯಾರದಾದರು ಮಾತು ಕೇಳಿ ಈ ಕಾರ್ಯ ಮಾಡಬೇಡಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ನುಡಿದಿದ್ದಾರೆ.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 