ದಾರೀದೀಪ’ದ ಭವ್ಯ ಸಮಾರಂಭ ಕೃಷ್ಣಗೌಡ್ರು ಪಾಟೀಲರಿಂದ ಪ್ರಮಾಣ ಪತ್ರ ವಿತರಣೆ
Grand ceremony of Darideepa Certificate distribution by Krishna Gaudru Patil
ಗದಗ 09: ಸ್ಥಳೀಯ ಹುಡ್ಕೋ ಕಾಲೋನಿಯ ಶ್ರೀ ಗುರು ಸಚ್ಚಿದಾನಂದ ಮಠದ ಆವರಣದಲ್ಲಿ ನಾಳೆ (ಜೂನ್ 10, ಬುಧವಾರ) ಬೆಳಿಗ್ಗೆ 11:30 ಕ್ಕೆ ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆ (ರಿ) ಗದಗ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಉಚಿತ ಬ್ಯಾಗ್ ತಯಾರಿಕಾ ಶಿಬಿರದ ಮುಕ್ತಾಯ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಮುಳುಗುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬಿ ಬದುಕಿಗೆ ಆಸರೆ ನೀಡುವ ನಿಟ್ಟಿನಲ್ಲಿ ದಾರೀದೀಪ ಸಂಸ್ಥೆಯು ಹಮ್ಮಿಕೊಂಡಿದ್ದ ಈ ವಿಶೇಷ ತರಬೇತಿ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಅನೇಕ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಂಡಿದ್ದಾರೆ. ನಾಳೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಕೃಷ್ಣಗೌಡ ಹೆಚ್. ಪಾಟೀಲರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಶಿಬಿರಾರ್ಥಿಗಳಿಗೆ ತಮ್ಮ ಅಮೃತ ಹಸ್ತದಿಂದ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಲಿದ್ದಾರೆ.
*ಮಹಿಳಾ ಶಕ್ತಿಯ ಸಂಘಟನೆ - ದಾರೀದೀಪದ ಸಾಧಕಿಯರು:* ಗದಗ ಜಿಲ್ಲೆಯಲ್ಲಿ ಮಹಿಳೆಯರನ್ನು ಸಂಘಟಿಸಿ, ಅವರಲ್ಲಿ ಉದ್ಯಮಶೀಲತೆಯ ಕನಸು ಬಿತ್ತುತ್ತಿರುವ ದಾರೀದೀಪ ಸಂಸ್ಥೆಯ ಹೆಜ್ಜೆಯ ಹಿಂದೆ ದೊಡ್ಡ ಮಹಿಳಾ ಶಕ್ತಿಯೇ ಶ್ರಮಿಸುತ್ತಿದೆ. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಮುಳುಗುಂದ ಅವರ ಸಮರ್ಥ ದೂರದರ್ಶಿತ್ವದ ನೇತೃತ್ವದಲ್ಲಿ, ಸಂಸ್ಥೆಯ ಪ್ರಮುಖ ನಾಯಕಿಯರಾದ ಜ್ಯೋತಿ ದೇಸಾಯಿ ಗೌಡರ, ಸುಪ್ರಿಯ ಅಯ್ಯನಗೌಡರ, ದೀಪ ಉಘಲಾಟ, ಸುರೇಖಾ, ರಾಜೇಶ್ವರಿ ಕುಲಕರ್ಣಿ, ಪ್ರತಿಭಾ ಏನಾಮತಿ, ಶೋಭಾ ಹಿರೇಮಠ, ನಿರ್ಮಲ ಪೂಜಾರ, ಸುಜಾತ ಅಬ್ಬಕಿ, ಆಶಾ ಕಂಠಿ ಹಾಗೂ ಸಮಿತಿಯ ಸರ್ವ ಸದಸ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಸಾಧಕ ಮಹಿಳೆಯರ ನಿರಂತರ ಕಾಳಜಿ, ತಾಯ್ತನದ ಪ್ರೀತಿ ಹಾಗೂ ಸಂಘಟನಾ ಚಾತುರ್ಯದಿಂದಾಗಿಯೇ ಇಂದು ಗದಗಿನ ಅನೇಕ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಮತ್ತು ಈ ತಂಡದ ರಚನಾತ್ಮಕ ಸಮಾಜಮುಖಿ ಕಾರ್ಯವೈಖರಿ ಇಡೀ ಜಿಲ್ಲೆಗೆ ಮಾದರಿಯಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾರೀದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಆರ್. ಮುಳಗುಂದ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ಎಸ್.ಎನ್. ಬಳ್ಳಾರಿ, ಕಾಂಗ್ರೆಸ್ ಯುವ ನಾಯಕರಾದ ರವಿಕುಮಾರ್ ರೆಡ್ಡಿ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಉಪಸ್ಥಿತರಿರಲಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಕುಟುಂಬ ಮತ್ತು ಸಮಾಜದ ಪ್ರಗತಿ ಸಾಧ್ಯ. ದಾರೀದೀಪ ಸಂಸ್ಥೆಯು ಮಹಿಳೆಯರಲ್ಲಿ ಸ್ವಯಂ ಉದ್ಯೋಗದ ಭರವಸೆ ಮೂಡಿಸುವ ಮೂಲಕ ಗದಗ ಜಿಲ್ಲೆಯಲ್ಲಿ ಅತ್ಯಂತ ಕರಾರುವಕ್ಕಾದ ಕೆಲಸ ಮಾಡುತ್ತಿದೆ.
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ 