ಜಮೀರ್ ಗೆ ಡಿ ಸಿ ಎಂ, ಶಾಸಕ ಜೆ.ಎನ್ ಗಣೇಶಗೆ ಸಚಿವ ಸ್ಥಾನ ನೀಡಿ ಒತ್ತಾಯ
Demand for DCM for Jameer, ministerial berth for MLA J.N. Ganesh
ಲೋಕದರ್ಶನ ವರದಿ
ಕಂಪ್ಲಿ 09: ಮಾಜಿ ಸಚಿವ ಜಮೀರ್ ಅಹ್ಮದ್ ಗೆ ಡಿಸಿಎಂ ಮತ್ತು ಶಾಸಕ ಜೆ.ಎನ್.ಗಣೇಶಗೆ ಸಚಿವ ಸ್ಥಾನ ನೀಡಬೇಕೆಂದು ಕಂಪ್ಲಿ ಅಂಜುಮನ್ ಖಿದ್ಮತ್-ಏ-ಇಸ್ಲಾಂ ಅಧ್ಯಕ್ಷ ಅಬ್ದುಲ್ ಕರೀಂ ಲಡ್ಡು ಒತ್ತಾಯಿಸಿದರು.ಪಟ್ಟಣದ ಅತಿಥಿ ಗೃಹದಲ್ಲಿ ಕಂಪ್ಲಿ ಅಂಜುಮನ ಖಿದ್ಮತ್-ಏ-ಇಸ್ಲಾಂ ವತಿಯಿಂದ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ವರ್ಷದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಝಡ್ ಜಮೀರ್ ಅಹ್ಮದ್ ಅವರು ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಸದಾ ಜನರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಜಮೀರ್ ಅಹ್ಮದ್ ಇವರಿಗೆ ಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ವರಿಷ್ಠರು, ಹೈಕಮಾಂಡ್ ಮತ್ತಷ್ಟು ಜನರ ಸೇವೆಗೆ ಮುಂದಾಗಬೇಕು. ಮತ್ತು ಸ್ಥಳೀಯ ಶಾಸಕ ಜೆ.ಎನ್.ಗಣೇಶಗೆ ಸಚಿವ ಸ್ಥಾನ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೆ ಇಳಿಯುವ ಜೊತೆಗೆ ಬರುವ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದರು.
ನಂತರ ಪ್ರಧಾನ ಕಾರ್ಯದರ್ಶಿ ಯು.ಜಹಿರುದ್ಧೀನ್ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಶಾಸಕ ಗಣೇಶ ಜನಪರ ಕಾರ್ಯದೊಂದಿಗೆ ಅಚ್ಚುಮೆಚ್ಚಿನ ನಾಯಕರಾಗುವ ಜೊತೆಗೆ ರಾಜ್ಯದಲ್ಲಿ ಒಂದೊಳ್ಳೇ ಹೆಸರು ಪಡೆದುಕೊಂಡಿದ್ದಾರೆ. ಸದಾ ಕ್ಷೇತ್ರದ ಜನರ ಮಧ್ಯದಲ್ಲಿದ್ದುಕೊಂಡು ಅವರ ಕಷ್ಟಗಳನ್ನು ಆಲಿಸಿ, ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಮತ್ತು ಜಮೀರ್ ಅಹ್ಮದ್ ಅವರ ಸೇವೆ ದೊಡ್ಡದಿದೆ. ಆದ್ದರಿಂದ ಜಮೀರ್ ಅಹ್ಮದ್ ಗೆ ಡಿಸಿಎಂ ಮತ್ತು ಜೆ.ಎನ್.ಗಣೇಶಗೆ ಸಚಿವ ಸ್ಥಾನ ನೀಡಲೇಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸೈಯದ್ ರಾಜಾಸಾಬ್, ಖಜಾಂಚಿ ಮೌಲಾ ಹುಸೇನ್, ಸದಸ್ಯರಾದ ಕೆ.ಮೆಹಬೂಬ್, ಮಸ್ತಾನ್ ಅಲಿ ಕಡಪಾ, ಅತ್ತಾವುಲ್ಲಾ ರೆಹಮಾನ್, ಸೈಯದ್ ಗೇಸುದರಾಜ್ ಖಾದ್ರಿ, ಎನ್.ಯುನೂಸ್, ಮುಖಂಡರಾದ ಸೈಯದ್ ಉಸ್ಮಾನ್, ಮೆಹಮೂದ್ ಸಾಬ್, ವರ್ದಿ ಜಾಫರ್, ಅಬ್ದುಲ್ ವಾಹೀದ್ ಸೇರಿದಂತೆ ಅನೇಕರಿದ್ದರು.
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ 