ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
CCB Police Raid: Heroin worth Rs 10.31 Lakhs, Items Seized; Arrest of three
ಬೆಳಗಾವಿ : ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಹೆರಾಯಿನ್ ಮಾದಕವನ್ನು ಮಾರಾಟ ಮಾಡುತ್ತಿದ್ದ ತಂಡದ ಮೇಲೆ ದಾಳಿ ಮಾಡಿರುವ ಬೆಳಗಾವಿ ನಗರ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದು, ಬಂಧಿತರಿಂದ ಹೆರಾಯಿನ್ ಸೇರಿ 10,31 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ನಿಖಿಲ್ ನಾರಾಯಣ ಬಳ್ಳಾರಿ (24) (ಸಾ: ರೈಲ್ವೆ ಕ್ವಾಟ್ರಸ್ ಬೆಳಗಾವಿ), ಕಪೀಲ ಗಜಾನನ ಹೊಸುರಕರ(18) (ಸಾ ಮುಜಾವರ ಗಲ್ಲಿ, ಬೆಳಗಾವಿ), ಆಕಾಶ ಆನಂದ ಸಾಳುಂಕೆ(34) (ಸಾ: ಮುಜಾವರ ಗಲ್ಲಿ, ಬೆಳಗಾವಿ), ಇವರುಗಳು ಬಂಧಿತ ಆರೋಪಿಸಿದರಾಗಿದ್ದಾರೆ.
ಇವರೆಲ್ಲರು ಬೆಳಗಾವಿಯ ತಾಂಗಡಿ ಗಲ್ಲಿ ಮಹಾದೇವ ಮಂದಿರ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಹೆರಾಯಿನ್ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಪಿಐ ಮಂಜುನಾಥ ನಾಯಕ ಇವರ ಮಾರ್ಗದರ್ಶನದಲ್ಲಿ ಮಂಜುನಾಥ ಭಜಂತ್ರಿ ಪಿಎಸ್‌ಐ ಸಿಸಿಟಿ ವಿಭಾಗ ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದಾರೆ.
ಆರೋಪಿತರಿಂದ 9,50,000 ಮೌಲ್ಯದ 47.29 ಗ್ರಾಂ ಹೆರಾಯಿನ್ (466 ಸಣ್ಣ ಚೀಟಿಗಳು),70,000 ಮೌಲ್ಯದ ಅವೆನ್ಯು ಸುಝುಕಿ ಸ್ಕೂಟರ್ ಒಂದು,10,800 ಮೌಲ್ಯದ 3 ಮೋಬೈಲ್‌ಗಳು, ಹಾಗೂ ನಗದು ಹಣ ರೂ. 300 ಹೀಗೆ ಆರೋಪಿತರಿಂದ ಒಟ್ಟು 10,31,100 ಮೌಲ್ಯದ ವಸ್ತುಗಳನ್ನು ಜಪ್ತಪಡಿಸಿಕೊಳ್ಳಲಾಗಿದೆ.
ಬಳಿಕ ಆರೋಪಿತರನ್ನು ವಿಚಾರಣೆಗೆ ಒಳಪಡಿಸಿದಾಗ ಹೆರಾಯಿನ್ ಮಾದಕ ವಸ್ತುವನ್ನು ಸಾಯಿನ್ ಕೋಳವಾಡಾ ಮುಂಬಯಿ ಮಹಾರಾಷ್ಟ್ರ ಇವಳ ಕಡೆಯಿಂದ ತಂದಿರುವುದಾಗಿ ತಿಳಿಸಿದ್ದಾರೆ.
ಮೂರು ಜನ ಆರೋಪಿತರ ವಿರುದ್ಧ ಖಡೇಬಜಾರ ಪೊಲೀಸ್ ಠಾಣೆ ಪ್ರ ಸಂ.61/2026 ಕಲಂ, 210) ಎನ್.ಡಿ.ಪಿ.ಎಸ್ ಕಾಯ್ದೆ-1963 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ಸಿಸಿಬಿ ತಂಡದ ಈ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ 