2024 - 25 ನೇ ಸಾಲಿನ ಹತ್ತಿ ಬೆಳೆಯ ಸಮೀಕ್ಷಾ ವರದಿ ಮತ್ತು ವಿಮಾ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಮನವಿ

2024 - 25 ನೇ ಸಾಲಿನ ಹತ್ತಿ ಬೆಳೆಯ ಸಮೀಕ್ಷಾ ವರದಿ ಮತ್ತು ವಿಮಾ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಮನವಿ Appeal demanding the issuance of a cotton crop survey report and insurance compensation for the 2024

ಲೋಕದರ್ಶನ ವರದಿ  

ವಿಜಯಪುರ 09 : ತಾಳಿಕೋಟಿ ತಾಲೂಕಿನಲ್ಲಿ 2024 / 25 ನೇ ಸಾಲಿನ ಹತ್ತಿ ಬೆಳೆಯ ಸಮೀಕ್ಷಾ ವರದಿ ಮತ್ತು ವಿಮಾ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ತಾಲೂಕಾ ಘಟಕ ತಾಳಿಕೋಟಿ ವತಿಯಿಂದ ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಳಿಕೋಟಿ ತಾಲೂಕಾ ಅಧ್ಯಕ್ಷರಾದ ಬಾಲಪ್ಪಗೌಡ ಲಿಂಗದಳ್ಳಿ, ಉಪಾಧ್ಯಕ್ಷರಾದ ರಾಮನಗೌಡ ಹಾದಿಮನಿ ಜಂಟಿಯಾಗಿ ಮಾತನಾಡಿ, 2024/25 ನೇ ಸಾಲಿನಲ್ಲಿ ತಾಳಿಕೋಟಿ ತಾಲೂಕಿನಾದ್ಯಂತ ಸಮಾರು 5000 ಕ್ಕಿಂತ ಹೆಚ್ಚು ರೈತರು ಬೆಳೆ ವಿಮೆಯಡಿ ನೋಂದಣಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಹತ್ತಿ ಬೆಳೆಗೆ ಸಂಬಂಧಿಸಿದಂತೆ ವಿಮಾ ಕಂಪನಿಯಿಂದ ಬೆಳೆ ಸಮೀಕ್ಷಾ ವರದಿಯೂ ಇಲ್ಲ ಮತ್ತು ಯಾವದೇ ವಿಮಾ ಪರಿಹಾರವು ಬಂದಿರುವುದಿಲ್ಲ.

ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ  ಹಾಗೂ ವಿಮಾ ಕಂಪನಿಯ ಅಧಿಕಾರಿಗಳಿಗೆ ಹಲವಾರು ಭಾರಿ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ ಕೂಡಲೇ ಮನವಿಗೆ ಸ್ಪಂದಿಸಿ  ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಮುಂಚೆ ಮನವಿ ನೀಡಲಾಗಿದೆ. ಜೂ. 15 ರ ವರೆಗೆ ಪರಿಹಾರ ನೀಡುವುದಾಗಿ ಓರಿಯಂಟಲ್ ವಿಮಾ ಕಂಪನಿಯವರು ಭರವಸೆ ನೀಡಿದ್ದಾರೆ. ಅದರಂತೆ ಪರಿಹಾರ ಕೊಡದಿದ್ದರೆ ಅವರ ಕಂಪನಿಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಅಶೋಕ ಉಪ್ಪಲದಿನ್ನಿ, ರಾಜು ವಾಲೀಕಾರ, ದೇಸಾಯಿ ಬೆನ್ನಟ್ಟಿ, ಅರುಣ ಕುಮಾರ ಪಾಟೀಲ, ನಾಗಪ್ಪ ಹಿರೂರ, ಮಾಳಪ್ಪ ಬೂದಿಹಾಳ, ಯಲ್ಲಪ್ಪ ಬಮ್ಮನಹಳ್ಳಿ, ಬಿ. ಜೆ. ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.