ಪಟ್ಟಣದಲ್ಲಿ ರಸ್ತೆಗಳು ಹಾಳಾಗಿ ಹೋಗಿವೆ ಎನ್ನುವ ಕಾರಣಕ್ಕೆ ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಒಟ್ಟು 36 ಕಾಮಗಾರಿಗಳು ಮಂಜೂರು

ಪಟ್ಟಣದಲ್ಲಿ ರಸ್ತೆಗಳು ಹಾಳಾಗಿ ಹೋಗಿವೆ ಎನ್ನುವ ಕಾರಣಕ್ಕೆ ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಒಟ್ಟು 36 ಕಾಮಗಾರಿಗಳು ಮಂಜೂರು A total of 36 works have been sanctioned under the infrastructure development scheme of the Hon'ble

ಲೋಕದರ್ಶನ ವರದಿ    

       ಸಿಂದಗಿ 09:  ಪಟ್ಟಣದಲ್ಲಿ ರಸ್ತೆಗಳು ಹಾಳಾಗಿ ಹೋಗಿವೆ ಎನ್ನುವ ಕಾರಣಕ್ಕೆ ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಒಟ್ಟು 36 ಕಾಮಗಾರಿಗಳು ಮಂಜೂರು ಆಗಿದ್ದು ​‍್ರ​‍್ರಥಮದಲ್ಲಿ ಬಸವ ಮಂಟಪದ ಹತ್ತಿರ ರಸ್ತೆ ಚಾಲನೆ ನೀಡಲಾಗಿದೆ ಒಂದು ತಿಂಗಳಲ್ಲಿ ಎಲ್ಲ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕೈಕೊಳ್ಳಲಾಗುವುದು ಕಾರಣ ಗುತ್ತಿಗೆದಾರರು ಗುಣಮಟ್ಟದ ರಸ್ತೆ ಮಾಡಬೇಕು ಕಳಪೆ ಕಾಮಗಾರಿಯಾಗಿದ್ದು ಕಂಡು ಬಂದರೆ ನಾನು ಸಹಿಸಲಾರೆ ಇಲ್ಲಿನ ಸಾರ್ವಜನಿಕರು ಮುಂದೆ ನಿಂತು ಗುಣಮಟ್ಟದ ಕಾಮಗಾರಿಗೆ ಸಹಕರಿಸಬೇಕು ಎಂದು ಶಾಸಕ ಅಶೋಕ ಎಮ್‌. ಮನಗೂಳಿ ಹೇಳಿದರು. 

        ನಗರದ ಬಸವ ಮಂಟಪ  ಹತ್ತಿರ ಕರ್ನಾಟಕ ಸರಕಾರ, ನಗರಸಭೆ ಕಾರ್ಯಾಲಯ ಸನ್ 2025-26 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಗರದ ಸೋಂಪೂರ ರಸ್ತೆಯ ಬಸವ ಮಂಟಪದಿಂದ ಕುಮಸಗಿ ಸರ್ ಮನೆಯ ವರೆಗೆ ಅ0ದಾಜು ಮೊತ್ತ : 30 ಲಕ್ಷಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜಾ ನೆರವೇರಿಸಿ ಮಾತನಾಡಿ, ನಗರದ 23 ವಾರ್ಡುಗಳಲ್ಲಿ ವಿದ್ಯುತ್, ರಸ್ತೆ, ಕುಡಿಯುವ ನೀರು  ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಇನ್ನೂ ರೂ 25 ಕೋಟಿ ವೆಚ್ಚದಲ್ಲಿ 43 ರಸ್ತೆಗಳ ಕಾಮಗಾರಿಗಳ ಪ್ರಸ್ತಾವನೆ ಮಂಜೂರು ಹಂತದಲ್ಲಿದೆ ಇನ್ನೂ ಒಂದು ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ

          ಸಾವ್ಜನಿಕರಿಗೆ ವಿದ್ಯುತ್, ರಸ್ತೆ, ಕುಡಿಯುವ ನೀರು ಸೆರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾದರೆ ಜನರು ಸಂತೋಷದಿಂದ ಇರುತ್ತಾರೆ ಎನ್ನುವ ಮಹಾದಾಸೆಯ ಮೇರೆಗೆ ಈ ರಸ್ತೆಯ ಕಡೆಗೆ ಸುಮಾರು 50 ವರ್ಷಗಳಿಂದ ಒಂದು ಬುಟ್ಟಿ ಗರಸ್ಸು ಕೂಡಾ ಹಾಕಿಲ್ಲ ರೂ 30 ಲಕ್ಷಗಳ ರಸ್ತೆ ಕಾಮಗಾರಿಯಿಂದ ಹರ್ಷ ವ್ಯಕ್ತಪಡಿಸಿದ್ದಾರೆ. ಈ ನಗರ 23 ವಾರ್ಡು, 56 ಸಾವಿರ ಜನಸಂಖ್ಯೆವುಳ್ಳ ನಗರವನ್ನು ಇಡೀ ಜಿಲ್ಲೆಯಲ್ಲೆ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟಿದ್ದೇನೆ ಅದಕ್ಕೆ ನಿಮ್ಮೇಲ್ಲರ ಸಹಕಾರ ಅತ್ಯಗತ್ಯ ಎಂದರು. 

ಆರೋಪ; ನಗರದ ಸೇವಾಲಾಲ ದೇವಸ್ಥಾನದ ಹತ್ತಿರ ಕೆಲ ತಿಂಗಳುಗಳ ಹಿಂದೆ ಶಾಸಕರ ನೇತೃತ್ವದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ವಿದ್ಯುತ್ ಬಲ್ಬ ಹಾಕುವಂತೆ, ಅಲ್ಲದೆ ಚರಂಡಿಗಳ ಸ್ವಚ್ಚತೆ ಬಗ್ಗೆ ಹೇಳಲಾಗಿದ್ದರು ಕೂಡಾ ಇನ್ನೂವರೆಗೂ ಪುರಸಭೆ ಅಧಿಕಾರಿಗಳು ಇತ್ತ ಕಡೆ ಕಣ್ಣೆತ್ತಿ ನೋಡಿಲ್ಲ ಶಾಸಕರ ಮುಂದೆ ತಲೆ ಅಲ್ಲಾಡಿಸಿ ಅವರು ಹೋದ ನಂತರ ಆ ಸಮಸ್ಯೆ ನಮ್ಮದಲ್ಲ ಎನ್ನುವ ಉತ್ತರ ಸಿಕ್ಕಿದೆ ಎಂದು ನಗರ ನಿವಾಸಿ ನಾಗರಾಜ ಬಿರಾದಾರ ಆರೋಪಿಸಿದರು.   

         ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾದಿಕಾರದ ಅಧ್ಯಕ್ಷ ಹಣಮಂತ ಸುಣಗಾರ, ಸದಸ್ಯರಾದ ಅಂಬ್ರಿಶ ಚೌಗಲೆ, ರವಿ ನಾವಿ, ಗ್ಯಾರೆಂಟಿ ಯೋಜನೆ ಸಮಿತಿ ಸದಸ್ಯೆ ಸುನಂದಾ ಯಂಪೂರೆ, ಕಾಂಗ್ರೆಸ್ ಸಮಿತಿ ಮಹಿಳಾ ಅಧ್ಯಕ್ಷ ಜಯಶ್ರೀ ಹದನೂರ, ಶಾಂತೂ ರಾಣಾಗೋಳ, ಸಾಯಬಣ್ಣ ಪುರದಾಳ, ನಿವೃತ್ ಶಿರಸ್ತೆದಾರ ಬಿ.ಎನ್‌.ಪಾಟೀಲ, ಶಶಿಕಲಾ ಅಂಗಡಿ, ಅನ್ವರ ಮುಲ್ಲಾ ವಕೀಲರು, ಪೌರಾಯುಕ್ತ ರವಿ ಶಿರಗುಪ್ಪಿ, ಕಿರಿಯ ಅಭಿಯಂತರ ಎ.ಜೆ.ನಾಟೀಕಾರ, ಗುತ್ತಿಗೆದಾರ ಸಿದ್ರಾಮ ಕಲಬುರ್ಗಿ, ಶ್ರೀಮಂತ ಮಲ್ಲೇದ, ಗೊಲ್ಲಾಳ ಬಂಕಲಗಿ, ಸಂತೋಷ ಮಲ್ಲೇದ, ಭೀಮನಗೌಡ ಬಿರಾದಾರ, ಮಲ್ಲು ಶೆಂಬೇವಾಡ, ರವಿ ಪಾಟೀಲ, ತಿರುಪತಿ ಬಂಡಿವಡ್ಡರ ಸೇರಿದಂತೆ ಅನೇಕರಿದ್ದರು.