ಸಿದ್ದ ಶಂಕರಾನಂದ ಸ್ವಾಮೀಜಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ
A felicitation program for SSLC students at Siddha Shankarananda Swamiji High School
ಲೋಕದರ್ಶನ ವರದಿ
ಸಿಂದಗಿ 09: ಸಾದನೆಗಳು ಸಾಧಕರ ಸ್ವತ್ತು ವಿನಃ ಸೋಮಾರಿಗಳ ಸ್ವತ್ತಲ್ಲ ಕಾರಣ ವಿದ್ಯಾರ್ಥಿಗಳು ಸಾಧನೆಗಳ ಮೆಟ್ಟಿಲೇರಬೇಕಾದರೆ ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ದಾಭಕ್ತಿಯಿಂದ ವಿದ್ಯೆಯಲ್ಲಿ ತಲ್ಲಿನ ಆದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಆ ರೀತಿಯಲ್ಲಿ ಹೆಚ್ಚಿನ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ ಎಂ ಹಂಗರಗಿ ಹೇಳಿದರು.
ತಾಲೂಕಿನ ಯರಗಲ್ಲ ಗ್ರಾಮದ ಶ್ರೀ ಸಿದ್ದ ಶಂಕರಾನಂದ ಸ್ವಾಮೀಜಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಯಕ್ತಿಕವಾಗಿ ನಗದು ರೂಪದಲ್ಲಿ ಧನ ಸಹಾಯ ನೀಡಿ ಮಾತನಾಡಿ, ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಮುಂದಿನ ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಗ್ರಾಮದ ಹೆಸರು ಹಾಗೂ ಸಂಸ್ಥೆ ಹೆಸರು ತನ್ನಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮದು. ಕಲಾವತಿ. ಪ್ರಿಯಾಂಕಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆ ಆಡಳಿತ ಸದಸ್ಯರಾದ ಎಲ್ ವಿ ಕುಲಕರ್ಣಿ. ಭೀಮಣ್ಣ ಹೇರೂರ, ಅಲ್ಲಿಸಾಬ ಬಂಕಲಗಿ, ಡಾ ಸಂಗು ಅಗಸರ. ಶಾಂತಾ ಮರಡಿ. ಗುರುರಾಜ ಕುಲಕರ್ಣಿ. ಮಲ್ಲು ಅಗಸರ. ರಾಮಣ್ಣ ಬಲುಂಡಗಿ. ಕಾಳಣ್ಣ ಅಗಸರ, ಮುಖ್ಯಗುರು ಅರುಣ ನಾಯ್ಕೋಡಿ, ದಾನಮ್ಮ ಶಿಂಪಿ. ರಾಜು ಯಡ್ರಾಮಿ. ಅಸ್ವಿನಿ ಲಮಾಣಿ ಸೇರಿದಂತೆ ಪಾಲಕರು ಇದ್ದರು.
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ 